ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಅಲಂಗಾರಿನಲ್ಲಿ ಕಣ್ಣಿನ ತಪಾಸಣೆ ಶಿಬಿರ

ಬಿದಿರೆ, February 12, 2018, 3:49 pm


ಮೂಡುಬಿದಿರೆ:ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ದಿನನಿತ್ಯ ಶುಚಿತ್ವ ಹಾಗೂ ರೋಗಲಕ್ಷಣ ಗೋಚರಿಸಿದಾಗಲೇ ವೈದ್ಯರನ್ನು ಸಂಪರ್ಕಿಸಿ ಅವಶ್ಯ ಶೂಶ್ರುಷೆಯನ್ನು ಪಡೆದಲ್ಲಿ, ಉತ್ತಮ ಜೀವನವನ್ನು ಸಾಗಿಸಲು ಸಾಧ್ಯ” ಎಂದು ಅಲಂಗಾರಿನ ಮೌಂಟ್ ರೋಸರಿ ಚ್ಯಾರಿಟೇಬಲ್ ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ವಂದನೀಯ ಫಾದರ್ ಎಡ್ವಿನ್ ಸಿ. ಪಿಂಟೊ ಹೇಳಿದರು. Dr. Sudhir Hegde Eye camp (1)

Dr. Sudhir Hegde Eye camp (2)

ಅವರು ಮಂಗಳೂರಿನ ಖ್ಯಾತ ಕಣ್ಣಿನ ತಜ್ಞ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಕೀಲ ಬಾಹುಬಲಿ ಪ್ರಸಾದ್, “ದಿನನಿತ್ಯದ ಚಟುವಟಿಕೆಗಳಲ್ಲಿ ಕಣ್ಣಿನ ಪಾತ್ರ ಮಹತ್ವದ್ದಾಗಿದ್ದು, ತಜ್ಞ ವೈದ್ಯರಿಂದ ತಪಾಸಣೆ ಮಾಡಿಸುವುದು ಅವಶ್ಯಕವಾಗಿದೆ ಎಂದರು. ಇನ್ನೋರ್ವ ಅತಿಥಿ ಮೌಂಟ್ ರೋಸರಿ ಚ್ಯಾರಿಟೇಬಲ್ ಸಂಸ್ಥೆಯ ಸದಸ್ಯರಾದ ನಿವೃತ್ತ ಮಾಸ್ಟರ್ ಆ್ಯಂಡ್ರೂ ಡಿ’ಸೋಜ, “ಇಂತಹ ಶಿಬಿರಗಳ ಪ್ರಯೋಜನ ಅವಶ್ಯವಿರುವವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಗಲಿ” ಎಂದು ಆಶಿಸಿದರು.

ದಿನನಿತ್ಯ ಕಣ್ಣಿನ ಆರೈಕೆ ಕುರಿತು ಡಾ.ಸುಧೀರ್ ಹೆಗ್ಡೆ ಮಾಹಿತಿ ನೀಡಿದರು. ಭಗಿನಿ ಪ್ರೆಸಿಲ್ಲಾ ಡಿ’ಮೆಲ್ಲೊ, ಶಿಬಿರದ ಸಂಯೋಜಕಿ, ಭಗಿನಿ ಸವಿತಾ, ಸಂಸ್ಥೆಯ ಕಾರ್ಯದರ್ಶಿ ಭಗಿನಿ ರಶ್ಮಿ, ಕಾರ್ಯನಿರತ ವೈದ್ಯೆ ಡಾ.ಜೋಸ್ಲಿಟಾ ರೆಬೆಲ್ಲೊ, ಸಮಗ್ರ ಸಮುದಾಯ ಆರೋಗ್ಯ ಯೋಜನೆಯ ಸಂಯೋಜಕರಾದ ಜಾನ್ ಟೌರೊ, ಜಿಲ್ಲಾ ಕಣ್ಣಿನ ವೈದ್ಯರ ಸಂಘದ ಕಾರ್ಯದರ್ಶಿಗಳಾದ ಡಾ.ಅಜಯ್ ಕುಡ್ವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ 309 ಜನ ತಪಾಸಣೆಗೆ ಒಳಪಟ್ಟಿದ್ದು, ಅವರಲ್ಲಿ 150 ಜನರಿಗೆ ಉಚಿತ ಕನ್ನಡಕವನ್ನು ವಿತರಿಸಲಾಗುತ್ತದೆ. 55 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಗುತ್ತದೆ.


Related News

Leave a Reply

Your email address will not be published. Required fields are marked *